Please Enter Bible Reference like John 3:16, Gen 1:1-5, etc
Bible Versions
Bible Books
ಕರ್ತನಿಗೆ ಹೊಸ ಹಾಡನ್ನು ಹಾಡಿರಿ; ಆತನು ಅದ್ಭುತಗಳನ್ನು ಮಾಡಿದ್ದಾನೆ; ಆತನ ಬಲಗೈಯೂ ಪರಿಶುದ್ಧತೋಳೂ ಆತನಿಗೆ ಜಯ ವನ್ನು ತಂದಿವೆ.
ರ್ತನು ತನ್ನ ರಕ್ಷಣೆಯನ್ನು ತಿಳಿಯ ಮಾಡಿದ್ದಾನೆ; ತನ್ನ ನೀತಿಯನ್ನು ಜನಾಂಗಗಳ ದೃಷ್ಟಿಗೆ ಬಹಿರಂಗವಾಗಿ ಪ್ರಕಟಮಾಡಿದ್ದಾನೆ.
ತನ್ನ ಕರುಣೆ ಯನ್ನೂ ಸತ್ಯತೆಯನ್ನೂ ಇಸ್ರಾಯೇಲಿನ ಮನೆಗೋಸ್ಕರ ಜ್ಞಾಪಕ ಮಾಡಿಕೊಂಡಿದ್ದಾನೆ; ಭೂಮಿಯ ಕೊನೆಗಳೆಲ್ಲಾ ನಮ್ಮ ದೇವರ ರಕ್ಷಣೆಯನ್ನು ನೋಡಿವೆ.
ಸಮಸ್ತ ಭೂಮಿಯೇ; ಕರ್ತನಿಗೆ ಉತ್ಸಾಹಧ್ವನಿ ಮಾಡಿರಿ, ಗಟ್ಟಿಯಾದ ಧ್ವನಿಯಿಂದ ಸಂತೋಷಿಸಿ ಕೀರ್ತಿಸಿರಿ.
ಕರ್ತನಿಗೆ ಕಿನ್ನರಿಯಿಂದ, ಹೌದು, ಕಿನ್ನರಿ ಯಿಂದಲೂ ಕೀರ್ತನೆಯ ಸ್ವರದಿಂದಲೂ ಹಾಡಿರಿ.
ತುತೂರಿಗಳಿಂದಲೂ ಹೌದು, ತುತೂರಿಯ ಶಬ್ಧ ದಿಂದಲೂ, ಅರಸನಾದ ಕರ್ತನ ಮುಂದೆ ಜಯಧ್ವನಿ ಮಾಡಿರಿ.
ಸಮುದ್ರವೂ ಅದರ ಪರಿಪೂರ್ಣತೆಯೂ ಲೋಕ ವೂ ಅದರ ನಿವಾಸಿಗಳೂ ಘೋಷಿಸಲಿ.
ಪ್ರವಾಹ ಗಳು ಕೈತಟ್ಟಲಿ; ಕರ್ತನ ಮುಂದೆ ಬೆಟ್ಟಗಳು ಕೂಡ ಉತ್ಸಾಹ ಧ್ವನಿಮಾಡಲಿ.
ಆತನು ಭೂಮಿಗೆ ನ್ಯಾಯ ತೀರಿಸಲು ಬರುತ್ತಾನೆ. ಲೋಕಕ್ಕೆ ನೀತಿಯಿಂದಲೂ ಜನಗಳಿಗೆ ನ್ಯಾಯದಲ್ಲಿಯೂ ತೀರ್ಪು ಕೊಡುವನು.