Please Enter Bible Reference like John 3:16, Gen 1:1-5, etc
Bible Versions
Bible Books
ದೇವರು ಬಲಶಾಲಿಗಳ ಮಧ್ಯದಲ್ಲಿ ನಿಂತು ದೇವರುಗಳಿಗೆ ನ್ಯಾಯತೀರಿಸುತ್ತಾನೆ.
ಎಷ್ಟರ ವರೆಗೂ ಅನ್ಯಾಯವಾಗಿ ತೀರ್ಪುಮಾಡಿ ದುಷ್ಟ ರಿಗೆ ಮುಖದಾಕ್ಷಿಣ್ಯ ಮಾಡುವಿರಿ? ಸೆಲಾ.
ದರಿದ್ರ ನನ್ನೂ ದಿಕ್ಕಿಲ್ಲದವನನ್ನೂ ಕಾಪಾಡಿ ದೀನನಿಗೂ ಬಡವ ನಿಗೂ ನೀತಿಯನ್ನು ಮಾಡಿರಿ.
ದರಿದ್ರನನ್ನೂ ಬಡವ ನನ್ನೂ ದುಷ್ಟರ ಕೈಯಿಂದ ಬಿಡಿಸಿರಿ.
ಅವರು ಅರಿಯರು; ಗ್ರಹಿಸುವದಿಲ್ಲ; ಕತ್ತಲೆಯಲ್ಲಿ ನಡೆದುಕೊಳ್ಳುತ್ತಾರೆ. ಭೂಮಿಯ ಅಸ್ತಿವಾರಗಳೆಲ್ಲಾ ಕ್ರಮವಿಲ್ಲದವುಗಳು.
ನಾನು--ನೀವು ದೇವರುಗಳು; ನೀವೆಲ್ಲರು ಮಹೋನ್ನತನ ಮಕ್ಕಳು ಎಂದು ಹೇಳಿದೆನು.
ಆದಾಗ್ಯೂ ಮನುಷ್ಯರ ಹಾಗೆ ನೀವು ಸಾಯುವಿರಿ; ಪ್ರಧಾನರಲ್ಲಿ ಒಬ್ಬನ ಹಾಗೆ ಬೀಳುವಿರಿ.
ಓ ದೇವರೇ, ಏಳು; ಭೂಮಿಗೆ ನ್ಯಾಯತೀರಿಸು; ನೀನು ಜನಾಂಗಗಳನ್ನೆಲ್ಲಾ ಬಾಧ್ಯವಾಗಿ ಹೊಂದುವಿ.