Please Enter Bible Reference like John 3:16, Gen 1:1-5, etc
Bible Versions
Bible Books
ಓ ದೇವರೇ, ನನ್ನ ಕೂಗನ್ನು ಕೇಳು; ನನ್ನ ಪ್ರಾರ್ಥನೆಯನ್ನು ಆಲೈಸು.
ನನ್ನ ಹೃದಯವು ಕುಂದಿಹೋಗಿರಲಾಗಿ, ಭೂಮಿಯ ಕಡೇ ಭಾಗದಿಂದ ನಿನ್ನನ್ನು ಕೂಗುವೆನು; ನನಗಿಂತ ಎತ್ತರ ವಾದ ಬಂಡೆಗೆ ನನ್ನನ್ನು ನಡಿಸು.
ನೀನು ನನಗೆ ಆಶ್ರಯವೂ ಶತ್ರುವಿನಿಂದ ತಪ್ಪಿಸುವ ಬಲವಾದ ಬುರುಜೂ ಆಗಿದ್ದೀ;
ನಿನ್ನ ಗುಡಾರದಲ್ಲಿ ನಾನು ಎಂದೆಂದಿಗೂ ವಾಸಿಸುವೆನು; ನಿನ್ನ ರೆಕ್ಕೆಗಳ ಮರೆಯಲ್ಲಿ ಭರವಸವುಳ್ಳವನಾಗಿರುವೆನು. ಸೆಲಾ.
ಓ ದೇವರೇ, ನೀನು ನನ್ನ ಹರಕೆಗಳನ್ನು ಕೇಳಿದ್ದೀ; ನಿನ್ನ ಹೆಸರಿಗೆ ಭಯಪಡುವವರಿಗೆ ಸ್ವಾಸ್ಥ್ಯವನ್ನು ಕೊಟ್ಟಂತೆ ನನಗೂ ಕೊಟ್ಟಿದ್ದೀ.
ಅರಸನ ಆಯುಷ್ಯ ವನ್ನು ಹೆಚ್ಚಿಸುವಿ; ಅವನ ವರುಷಗಳು ಅನೇಕ ತಲ ತಲಾಂತರಗಳ ಹಾಗೆ ಇರುವವು.
ಅವನು ಎಂದಿಗೂ ದೇವರ ಮುಂದೆ ವಾಸಿಸುವನು; ಅವನನ್ನು ಕಾಯು ವದಕ್ಕೆ ಕರುಣೆಯನ್ನೂ ಸತ್ಯವನ್ನೂ ಸಿದ್ಧಮಾಡು.
ಹಾಗಾದರೆ ನನ್ನ ಹರಕೆಗಳನ್ನು ದಿನ ದಿನಕ್ಕೆ ಸಲ್ಲಿ ಸುವ ಹಾಗೆ ನಿನ್ನ ಹೆಸರನ್ನು ಎಂದೆಂದಿಗೂ ನಾನು ಕೀರ್ತಿಸುವೆನು.