Please Enter Bible Reference like John 3:16, Gen 1:1-5, etc
Bible Versions
Bible Books
ಓ ದೇವರೇ, ನನ್ನನ್ನು ಕಾಪಾಡು; ನಿನ್ನಲ್ಲಿ ಭರವಸವಿಟ್ಟಿದ್ದೇನೆ.
ನೀನೇ ನನ್ನ ಕರ್ತನು; ನನ್ನ ಒಳ್ಳೇತನ ನಿನಗೆ ಮಾತ್ರವಲ್ಲದೆ
ಭೂಮಿಯಲ್ಲಿರುವ ಪರಿಶುದ್ಧರಿಗೂ ನನ್ನ ಸಂತೋಷ ವಾಗಿರುವ ಮುಖ್ಯಸ್ಥರಿಗೂ ಸೇರುತ್ತದೆಂದು ಓ ನನ್ನ ಆತ್ಮವೇ, ನೀನು ಕರ್ತನಿಗೆ ಹೇಳಿದ್ದೀ.
ಬೇರೆ ದೇವ ರಗಳ ಹಿಂದೆ ತ್ವರೆಪಡುವವರ ವ್ಯಥೆಗಳು ಹೆಚ್ಚಾಗು ವವು. ಅವರ ರಕ್ತದ ಅರ್ಪಣೆಗಳನ್ನು ನಾನು ಅರ್ಪಿ ಸುವದಿಲ್ಲ, ಅವರ ಹೆಸರುಗಳನ್ನೂ ನನ್ನ ತುಟಿಗಳಲ್ಲಿ ಎತ್ತೆನು.
ಕರ್ತನು ನನ್ನ ಪಾಲಿನ ಮತ್ತು ನನ್ನ ಪಾತ್ರೆಯ ಭಾಗವಾಗಿದ್ದಾನೆ; ನೀನು ನನ್ನ ಸ್ವಾಸ್ತ್ಯವನ್ನು ಸ್ಥಿರವಾಗಿ ಕಾಪಾಡುತ್ತೀ.
ರಮ್ಯ ಸ್ಥಳಗಳಲ್ಲಿ ನನಗೆ ಪಾಲು ಸಿಕ್ಕಿತು, ಹೌದು, ರಮಣೀಯವಾದ ಬಾಧ್ಯತೆ ನನಗೆ ಅದೆ.
ನನಗೆ ಆಲೋಚನೆ ಹೇಳಿದ ಕರ್ತನನ್ನು ನಾನು ಸ್ತುತಿಸುವೆನು, ರಾತ್ರಿಯಲ್ಲಿಯೂ ನನ್ನ ಅಂತರಿಂದ್ರಿ ಯಗಳು ನನಗೆ ಬೋಧಿಸುತ್ತವೆ.
ನಾನು ಕರ್ತನನ್ನು ಯಾವಾಗಲೂ ನನ್ನ ಮುಂದೆ ಇಟ್ಟುಕೊಂಡಿದ್ದೇನೆ. ಆತನು ನನ್ನ ಬಲಗಡೆಯಲ್ಲಿ ಇರುವದರಿಂದ ನಾನು ಕದಲೆನು.
ಆದದರಿಂದ ನನ್ನ ಹೃದಯವು ಸಂತೋಷಿಸಿ ನನ್ನ ಹೆಮ್ಮೆಯು ಉಲ್ಲಾಸಪಡುತ್ತದೆ; ನನ್ನ ಶರೀರವು ಸಹ ನಿರೀಕ್ಷೆಯಿಂದ ವಿಶ್ರಾಂತಿಸುವದು.
ಯಾಕಂದರೆ ನೀನು ನನ್ನ ಆತ್ಮವನ್ನು ನರಕದಲ್ಲಿ ಬಿಟ್ಟುಬಿಡುವದಿಲ್ಲ; ನಿನ್ನ ಪರಿಶುದ್ಧನ ಕೊಳೆಯುವಿಕೆಯನ್ನು ನೋಡ ಗೊಡಿಸುವದಿಲ್ಲ.
ಜೀವದ ಮಾರ್ಗವನ್ನು ನನಗೆ ತಿಳಿಸುವಿ; ನಿನ್ನ ಸಮ್ಮುಖದಲ್ಲಿ ಪರಿಪೂರ್ಣ ಸಂತೋಷ ವೂ ನಿನ್ನ ಬಲಗಡೆಯಲ್ಲಿ ಶಾಶ್ವತ ಭಾಗ್ಯವೂ ಇರುತ್ತವೆ.